ಆದರೆ ಈ ಪುಸ್ತಕಗಳು ನಮ್ಮ ಸ್ಮರಣೆ ಹಾಗೂ
ಕಲ್ಪನೆಯ ಮುಂದುವರಿಕೆಗಳೆಂದೇ ಹೇಳಬಹುದು.
ಮಾನವನ ಸ್ಮರಣೆ ಮತ್ತು ಕಲ್ಪನೆಗಳು
ಮಾಯವಾಗುವದಿಲ್ಲ: ಹಾಗೆಯೇ ಅವನು ಬರೆದ
ಪುಸ್ತಕಗಳೂ. ಇದಲ್ಲದೆ ಅವು ಮಾನವನ
ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ
ಸಾಧನಗಳು. ಒಟ್ಟಾರೆ ಮನುಕುಲವು ಜಗತ್ತಿನ ಬಗೆಗೆ
ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ: ಅದಕ್ಕೇ ಆ
ಜ್ಞಾನದ ಸಂಗ್ರಹ ಮತ್ತು ಹರಡುವಿಕೆ ಮತ್ತು
ಮುಂದುವರಿಕೆಗೆ ಪುಸ್ತಕ ಬೇಕೇ ಬೇಕು.
ಮನುಕುಲದ ಬೌದ್ಧಿಕ ವಿಕಾಸಕ್ಕೆ ಪುಸ್ತಕಗಳು ಬೇಕೇ
ಬೇಕು. “ಪುಸ್ತಕಗಳು ನಾಗರಿಕತೆಯನ್ನು
ಮುನ್ನಡೆಸುವ ಸಾಧನಗಳು” ಎಂದು ವಿನ್ಸ್ಟನ್
ರ‍್ಚಿಲ್ ಒಂದು ಸಂರ‍್ಭದಲ್ಲಿ ಹೇಳಿದ್ದಾರೆ.
ಒಟ್ಟಾರೆ ಸಮಾಜದ ರ‍್ವತೋಮುಖ ಬೆಳವಣಿಗೆಗೆ
ಪುಸ್ತಕಗಳು ಬೇಕೇ ಬೇಕು. ಈ ಪುಸ್ತಕಗಳು ಜಗತ್ತಿನಿಂದ
ಮಾಯವಾಗುವದಿಲ್ಲ. ಆದರೆ ಆಧುನಿಕ
ತಂತ್ರಜ್ಞಾನದಿಂದಾಗಿ ಭವಿಷ್ಯದ ಪುಸ್ತಕಗಳು ಬೇರೆಯ
ತೆರನಾಗಿ ಕಾಣಬಹುದಷ್ಟೆ.
