ಫ್ರೆಡ್ ಹಾಯ್ಲ್, ಲೆಮೇಚರ್, ಸ್ಟೀಫನ್ ಹಾಕಿಂಗ್ ಮುಂತಾದ ವಿಶ್ವಸೃಷ್ಟಿವಿಜ್ಞಾನದ ದಿಗ್ಗಜರ ತರ್ಕಗಳನ್ನು, ಸಿದ್ಧಾಂತಗಳನ್ನು ಉಪಯೋಗಿಸಿ ಬ್ರಹ್ಮಾಂಡದ ಹುಟ್ಟು ದೇವ ಪ್ರೇರಣೆಯಿಂದಲೋ ಅಥವಾ ಸೃಷ್ಟಿಯ ವ್ಯಕ್ತ ನಿಯಮಗಳ ಫಲಿತವೋ ಎಂಬುವದನ್ನು ವಿಜ್ಞಾನವೇನಾದರೂ ನಿಖರವಾಗಿ ಹೇಳಬಲ್ಲುದೇ ಎಂಬ ಪ್ರಶ್ನೆಗೆ ಉತ್ತರ ಶೋಧನೆಯೇ ಪುಸ್ತಕದ ಕಥಾವಸ್ತು. ಈ ಪುಸ್ತಕವನ್ನು ವಿಜ್ಞಾನದ ತತ್ವಶಾಸ್ತç(Phiಟosoಠಿhಥಿ oಜಿ Sಛಿieಟಿಛಿe) ಎನ್ನಬಹುದೇನೋ. ಧರ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಸರ್ವವಿದಿತ ನಿರ್ಣಯವೇ ಆಗಿದೆ. ನಮ್ಮ ಭೌತಿಕ ವಿಶ್ವದ ಹುಟ್ಟುಸಾವುಗಳ ಬಗ್ಗೆ ಮತ್ತು ಅದರ ಅಸ್ತಿತ್ವದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ವಸ್ತುನಿಷ್ಠವಾಗಿ ಮತ್ತು ಆಧಾರಸಹಿತವಾಗಿ ಪ್ರಯತ್ನಿಸುವುದೇ ವಿಜ್ಞಾನದ ಉದ್ದೇಶ. ಅದು ಬಳಸುವ ಭಾಷೆ ತರ್ಕಶಾಸ್ತçದ್ದು ಮತ್ತು ವಿಶೇಷವಾಗಿ ಗಣಿತೀಯವಾದದ್ದು. ವಿಜ್ಞಾನವು ‘ಇದು ಹೇಗೆ’ ಎಂಬ ಪ್ರಶ್ನೆಗೆ ಉತ್ತರಿಸಬಲ್ಲದಲ್ಲದೆ ‘ಇದು ಏಕೆ?’ ಎಂಬ ಪ್ರಶ್ನೆಗೆ ನಿರುತ್ತರಿಯಾಗಿದೆ. ವೀಕ್ಷಕ/ಚಿಂತಕನಾದ ವಿಜ್ಞಾನಿಯ ದೃಷ್ಟಿಕೋನವನ್ನು ತಿಳಿಸುತ್ತದೆಯೇ ಹೊರತು, ಆತನ ಮನಸ್ಸಿನ/ವಿದ್ಯೆಯ ಇತಿಮಿತಿಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ವಿಜ್ಞಾನದಾಚೆ ನೋಡಲು ಪ್ರಯತ್ನಿಸಿದರೆ, ‘ಧರ್ಮ, ದೇವರು, ತತ್ವಜ್ಞಾನ, ಅತೀಂದ್ರಿಯ ಜ್ಞಾನ, ಯೋಗ’ ಮುಂತಾದ ಸಂಪೂರ್ಣ ಮಾನವಿಕ ಕಲಮುಗಳು(ಪರಾವೈಜ್ಞಾನಿಕ) ಎದುರಾಗುತ್ತವೆ. ಕಳೆದ ಶತಮಾನದಲ್ಲಿ ಆಧುನಿಕ ಭೌತವಿಜ್ಞಾನವಾಗಲೀ, ಆಧುನಿಕ ಗಣಿತ ಶಾಸ್ತçವಾಗಲೀ ‘ಮಡಿವಂತಿಕೆ’ ಬಿಟ್ಟು, ಪರಾವಿಜ್ಞಾನವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದವು. ಪ್ರಸ್ತುತ ಕೃತಿಯು ಅತ್ಯಂತ ತರ್ಕಬದ್ಧವಾಗಿ ಓದುಗರನ್ನು ವಿಜ್ಞಾನಮಾರ್ಗದ ಮುಖಾಂತರವೇ ಸೀಮೋಲ್ಲಂಘನೆ ಮಾಡಿಸಿ ಪರಾ ಮತ್ತು ಯೋಗವಿಜ್ಞಾನಗಳ ಕ್ಷೇತ್ರಕ್ಕೆ ಕಾಲಿಡಿಸುತ್ತದೆ. ವಿಜ್ಞಾನದ ನಿಯಮಾದಿಗಳನ್ನು ವಿಶ್ಲೇಷಿಸುತ್ತ, ನಿಯಮಗಳ ಮೂಲಕ್ಕೇ ಕೈ ಹಾಕುತ್ತದೆ. ಇಲ್ಲಿ ವಿಜ್ಞಾನದ ಬೆನ್ನೆಲುಬಾದ ತತ್ವಜ್ಞಾನವು ಬೇಕೇ ಬೇಕಾಗುತ್ತದೆ. ಇಡೀ ವಿಶ್ವವು ಒಂದು ಬೃಹದ್‌ಯಂತ್ರವೆAದು ಕಲ್ಪಿಸಿದರೆ, ‘ಈ ಯಂತ್ರದ ಶಿಲ್ಪಿಯು ಯಾರು? ಅಥವಾ ಇದು ಸ್ವಯಂಭೂ ಆಗಿದೆಯೇ’ ಎಂಬ ಮೂಲಭೂತ ಪ್ರಶ್ನೆಗಳೇಳುತ್ತವೆ. ಕೊನೆಗೆ, ರೂಢವಿಜ್ಞಾನದ ಇತಿಮಿತಿಗಳನ್ನು ಅನುಲಕ್ಷಿಸಿ ‘ದೇವರು ಇದ್ದಾನೆಯೇ?’ ಅಥವಾ ‘ದೇವರ ಕಲ್ಪನೆ ಅನಿವಾರ್ಯವೇ?’ ಎಂಬAಥ ಅಂತಿಮ ಪ್ರಶ್ನೆಗಳಿಗೆ ಯೌಗಿಕ/ಪಾರಮಾರ್ಥಿಕ ಪರಿಭಾಷೆಯಲ್ಲಿ ಉತ್ತರಗಳನ್ನು ಕಾಣಲು ಪ್ರಯತ್ನಿಸಲಾಗಿದೆ.
ವೈಜ್ಞಾನಿಕ ಮನೋಭಾವದ ಬೆಳವಣಿಗೆಯಿಂದ ಸೃಷ್ಟಿಯ ಕೆಲವು ಚಮತ್ಕಾರಗಳು ಪವಾಡಸದೃಶವಾಗಿದ್ದರೂ ಸಮರ್ಥ ವಿವರಣೆಯಿಂದಾಗಿ ಈ ಚಮತ್ಕಾರಗಳೆಲ್ಲ ಸಹಜ, ನೈಸರ್ಗಿಕ ಕ್ರಿಯೆಗಳೆಂದು ತಿಳಿಯುವಷ್ಟು ಮಾನವ ಪ್ರಗತಿ ಹೊಂದಿದ್ದಾನೆAಬುದು ಸಂತೋಷದ ವಿಷಯ. ಸರ್ ಆರ್ಥರ್ ಎಡ್ಡಿಂಗ್‌ಟನ್ ತಮ್ಮ ‘ಭೌತಿಕ ಜಗತ್ತಿನ ಸ್ವಭಾವ’ ಎಂಬ ಪುಸ್ತಕದಲ್ಲಿ ಇಡೀ ಭೌತಿಕ ಜಗತ್ತೇ ಛಾಯಾ ರೂಪಿ, ಎಂದು ಬಣ್ಣಿಸಿದ್ದಾರೆ. ಆಧುನಿಕ ಭೌತವಿಜ್ಞಾನವು ಹೆಚ್ಚು ಪಾಲು ವೇದಗಳು ಪ್ರತಿಪಾದಿಸಿದ ಸತ್ಯದ ಕಡೆಗೆ ಸಾಗುತ್ತದೆ ಎಂದು ಅನ್ನಿಸದಿರದು. ವಿಶ್ವದುಗಮದ ಬಗೆಗೆ ಇರುವ ಆಧುನಿಕ ಸಿದ್ಧಾಂತಗಳು ಮತ್ತು ಹಿಂದೂ ಧರ್ಮಗ್ರಂಥಗಳಾದ ವೇದ, ಉಪನಿಷತ್ತು, ಗೀತೆಗಳಲ್ಲಿ ಇರುವ ಸಾಮ್ಯತೆ ಅಚ್ಚರಿಯನ್ನುಂಟುಮಾಡುತ್ತದೆ. ಪ್ರಪಂಚದಲ್ಲಿರುವದೆಲ್ಲವೂ ದ್ವಂದ್ವದಿAದ ಕೂಡಿದ್ದು ಎಂದು ವಿಜ್ಞಾನವೇ ಪ್ರತಿಪಾದಿಸಬೇಕಾದರೆ, ವೇದಗಳ ‘ಮಾಯಾ’ ಸಿದ್ಧಾಂತವು ತಾನೇ ತಾನಾಗಿ ಪುರಸ್ಕರಿಸಲ್ಪಡುತ್ತದೆ. ಆಗ ವಿಜ್ಞಾನವೂ ಆಧ್ಯಾತ್ಮವೂ ಒಂದುಗೂಡಿದAತೆ ಆಗಬಹುದು.
ವಿಜ್ಞಾನ ಮತ್ತು ಆಧ್ಯಾತ್ಮ ಇವೆರಡೂ ಪರಸ್ಪರ ಪೂರಕವೂ ಹಾಗೂ ಮಾನವನನ್ನು, ಸೃಷ್ಟಿಯನ್ನು ಹಾಗೂ ಇಡೀ ಅಸ್ತಿತ್ವವನ್ನು ಅರಿಯಲು ಅಭಿವೃದ್ಧಿಗೊಂಡಿವೆ ಎಂದು ಮನವರಿಕೆ ಆಗದೇ ಇರದು. ವಿಜ್ಞಾನವು ಮಾನವನ ಹೊರಗೆ ಹೋಗಿ, ಸೃಷ್ಟಿಯನ್ನು ಅರಿತು, ತನ್ನ ಅನುಕೂಲತೆಗೆ ತಕ್ಕಂತೆ ಅದನ್ನು ಬಳಸಿಕೊಳ್ಳಲೆತ್ನಿಸಿದೆ. ಆಧ್ಯಾತ್ಮವು ಮಾನವನ ಒಳಗೆ ಹೋಗಿ ಅವನನ್ನು, ಅವನಾತ್ಮವನ್ನು (ಆ ಅರಿಯುವನನ್ನೇ ಅರಿಯಲು) ಅರಿಯಲು ಪ್ರಯತ್ನಿಸುತ್ತಿದೆ. ಇಡೀ ಸೃಷ್ಟಿ ಮತ್ತು ಮಾನವನ ಬದುಕಿನ ಎಲ್ಲಾ ಆಗು ಹೋಗುಗಳನ್ನು ಸಮಗ್ರವಾಗಿ ಅರಿಯುವಲ್ಲಿ ವಿಜ್ಞಾನ, ಆಧ್ಯಾತ್ಮಗಳೆರಡನ್ನೂ ಸಮೀಕರಿಸಿ ನೋಡಿದಾಗಲೇ ಇಡೀ ಅಸ್ತಿತ್ವದ ಸರಿಯಾದ ಅರ್ಥವಾಗುತ್ತದೆ.
ಸೃಷ್ಟಿಯು ಅತ್ಯಂತ ವ್ಯವಸ್ಥಿತವಾಗಿದ್ದು, ನಿಖರವಾದ ಭೌತಿಕ ನಿಯಮಗಳು, ಕಾರ್ಯ-ಕಾರಣ ಸಂಬAಧಗಳು ಅಸ್ತಿತ್ವದಲ್ಲಿ ಇವೆ. ಈ ನಿಯಮಗಳು ನಂಬಲರ್ಹವಾಗಿ ವರ್ತಿಸುತ್ತಿವೆ. ಸೃಷ್ಟಿಯು ಒಂದೇ ರೀತಿಯಲ್ಲಿ ಮುನ್ನಡೆಯುತ್ತಿದೆ. ಈ ಕಾರ್ಯ-ಕಾರಣ ವ್ಯವಸ್ಥೆ ತಾರ್ಕಿಕ ಅಗತ್ಯವಾಗಿ ಹೊಮ್ಮದು, ಇದು ಸೃಷ್ಟಿಯ ಗುಣಧರ್ಮ. ನಾವು ಅದರ ಸ್ಪಷ್ಟೀಕರಣವನ್ನು ಪಡೆಯಲೆತ್ನಿಸಬಹುದು. ದೇವಶಿಲ್ಪಿಯ ರಚನಾಕೌಶಲ್ಯವನ್ನು ಎಲ್ಲದರಲ್ಲಿಯೂ ಕಾಣಬಹುದು. ಅಂತೆಯೆ ರಚನಾ ವಿನ್ಯಾಸದ ಸಾಕ್ಷಿಯನ್ನು ಸೃಷ್ಟಿಯ ಪ್ರತಿಯೊಂದರಲ್ಲಿಯೂ ಕಾಣಬಹುದು. ಈ ಸೃಷ್ಟಿ ಯಾವುದೋ ಯೋಜನೆಯಂತೆಯೋ ಅಥವಾ ನೀಲನಕ್ಷೆಯಲ್ಲಿರುವಂತೆಯೋ ಅನಾವರಣಗೊಳ್ಳುತ್ತಿದೆ. ಆ ನೀಲನಕ್ಷೆಯ ಪಾತ್ರವನ್ನು ಭೌತಿಕ ನಿಯಮಗಳು ವಹಿಸುತ್ತವೆ. ಈ ವಿಶ್ವವು ಯಾವ ನಿಯಮಗಳ ಆಧಾರದಿಂದ ಪ್ರಸ್ತುತವಾಗಿದೆ ಎಂಬುವಷ್ಟನ್ನಾದರೂ ನಾವು ತಿಳಿದಿದ್ದೇವೆ. ನಾವು ವಿಶ್ವದೊಂದಿಗೆ ಹೇಗೆ ಸಂಬAಧಿಸಿಕೊAಡಿದ್ದೇವೆ ಎಂಬುದು ತಿಳಿಯದಿದ್ದರೂ ಸಂಬAಧವನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ.
ಈ ಪುಸ್ತಕದ ಅಧ್ಯಾಯಗಳು ಹೀಗಿವೆ-ತರ್ಕ ಮತ್ತು ಶ್ರದ್ಧೆ, ವಿಶ್ವ ಸ್ವಯಂಭೂ, ಭೌತಿಕ ನಿಯಮಗಳ ಸ್ವಭಾವ, ಗಣಿತ ಮತ್ತು ವಾಸ್ತವಿಕತೆ, ವಿಶ್ವವು ಈಗಿದ್ದ ಹಾಗೆ ಯಾಕೆ ಇದೆ?, ಶಿಲ್ಪಿರಚಿತ ವಿಶ್ವ, ವಿಶ್ವದಸ್ತಿತ್ವದ ನಿಗೂಢತೆ.
“ನಾವೆಂದಾದರೂ ಒಂದು ಸಂಪೂರ್ಣ ಸಿದ್ಧಾಂತವನ್ನು ರೂಪಿಸಿದರೆ,
ಅದು ಸರಳವಾಗಿರಬೇಕು. ವೇದಾಂತಿಗಳೂ, ವಿಜ್ಞಾನಿಗಳೂ, ಸಾಮಾನ್ಯರೂ,
ಒಟ್ಟಿಗೇ ಕುಳಿತು ಚರ್ಚಿಸಿ ಅರ್ಥ ಮಾಡಿಕೊಳ್ಳುವಂತಿರಬೇಕು.
ನಾವೂ, ಈ ವಿಶ್ವವೂ ಏಕೆ ಇಲ್ಲಿದ್ದೇವೆ, ನಮ್ಮ ಇರವಿಗೆ ಅರ್ಥವೇನು?
ಎಂದು ಎಲ್ಲರೂ ಕೂಡಿಯೇ ಚರ್ಚಿಸುವಂತಿರಬೇಕು.
ಆಗ ಮಾನವನ ಆಲೋಚನಾ ಶಕ್ತಿ ಗೆಲವು ಸಾಧಿಸಿದಂತಾಗುತ್ತದೆ.
ನಮಗೆ ದೇವರ ಮನಸ್ಸಿನಲ್ಲಿ ಏನಿದೆ ಎಂಬ ಅರಿವುಂಟಾಗುತ್ತದೆ.
ವಿಜ್ಞಾನ ಎಂದಾದರೂ ‘ಹೇಗೆ?’ ಎಂಬ ಪ್ರಶ್ನೆಗೆ ಉತ್ತರಿಸಬಹುದು,
ಆದರೆ ‘ಏಕೆ?’ ಎಂಬ ಪ್ರಶ್ನೆಗೆ ಉತ್ತರಿಸಲಾರದು.”
- ಸ್ಟೀಫನ್ ಹಾಕಿಂಗ್