ವೈದ್ಯವಿಜ್ಞಾನವನ್ನು ಆಧ್ಯಾತ್ಮದೊಂದಿಗೆ ಮೇಳೈಸಿಕೊಂಡು ಬರೆದ ಪುಸ್ತಕ ಇದು. ಇಲ್ಲಿ ವಿಜ್ಞಾನವನ್ನು ಜಾಲಾಡಿಸಿ, ಜಾಲತಾಣಗಳಲ್ಲಿ ಹುಡುಕಿ ಅಂಕಿ ಅಂಶಗಳನ್ನು ಕಲೆಹಾಕಿ, ವಿಜ್ಞಾನದ ಮೂಸೆಯಲ್ಲಿ ಮೂರ್ತ ರೂಪ ಕೊಟ್ಟು, ಓದುಗರಿಗೆ ಕೌತುಕದ ಕಿಚ್ಚು ಹಚ್ಚಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ ಈ ಪುಸ್ತಕ. ಮಾನವನ ದೇಹದಲ್ಲಿ ಏನೆಲ್ಲ ಅಡಗಿದೆ ಎಂದು ಹುಡುಕುವಾಗ ಅದ್ಭುತ ಬ್ರಹ್ಮಾಂಡವೇ ಕಣ್ಣೆದುರು ನಿಲ್ಲುವುದು. ನೂಲಿನ ಎಳೆಗಳಂತೆ ಬಿಡಿಬಿಡಿಸಿ ವಿಷಯ, ಅನಿಸಿಕೆಗಳು, ವಿಚಾರಗಳು ೨೫ ಶೀರ್ಷಿಕೆಗಳ ಅಡಿಯಲ್ಲಿ ಹಿಡಿಯಲ್ಪಟ್ಟಿವೆ. ಶೀರ್ಷಿಕೆಗಳು ಆಕರ್ಷಕವಾಗಿವೆ. ಅದಕ್ಕೂ ಹೆಚ್ಚು ಆಕರ್ಷಣೆ ವಿಷಯ ವಿಶ್ಲೇಷಣೆಯಲ್ಲಿದೆ. ಪ್ರತಿ ಶೀರ್ಷಿಕೆಗೆ ಸಂಬAದಿಸಿದ ಜಗತ್ಪçಸಿದ್ಧ ವಿಜ್ಞಾನಿಗಳ, ವಿದ್ವಾಂಸರ ಸಮಂಜಸ, ಸಮರ್ಪಕ ಹೇಳಿಕೆಗಳಿವೆ.
ವೈದ್ಯವಿಜ್ಞಾನವನ್ನು ಆಧ್ಯಾತ್ಮದೊಂದಿಗೆ ಮೇಳೈಸಿಕೊಂಡು ಬರೆದ ಪುಸ್ತಕ ಇದು. ಇಲ್ಲಿ ವಿಜ್ಞಾನವನ್ನು ಜಾಲಾಡಿಸಿ, ಜಾಲತಾಣಗಳಲ್ಲಿ ಹುಡುಕಿ ಅಂಕಿ ಅಂಶಗಳನ್ನು ಕಲೆಹಾಕಿ, ವಿಜ್ಞಾನದ ಮೂಸೆಯಲ್ಲಿ ಮೂರ್ತ ರೂಪ ಕೊಟ್ಟು, ಓದುಗರಿಗೆ ಕೌತುಕದ ಕಿಚ್ಚು ಹಚ್ಚಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ ಈ ಪುಸ್ತಕ. ಮಾನವನ ದೇಹದಲ್ಲಿ ಏನೆಲ್ಲ ಅಡಗಿದೆ ಎಂದು ಹುಡುಕುವಾಗ ಅದ್ಭುತ ಬ್ರಹ್ಮಾಂಡವೇ ಕಣ್ಣೆದುರು ನಿಲ್ಲುವುದು. ನೂಲಿನ ಎಳೆಗಳಂತೆ ಬಿಡಿಬಿಡಿಸಿ ವಿಷಯ, ಅನಿಸಿಕೆಗಳು, ವಿಚಾರಗಳು ೨೫ ಶೀರ್ಷಿಕೆಗಳ ಅಡಿಯಲ್ಲಿ ಹಿಡಿಯಲ್ಪಟ್ಟಿವೆ. ಶೀರ್ಷಿಕೆಗಳು ಆಕರ್ಷಕವಾಗಿವೆ. ಅದಕ್ಕೂ ಹೆಚ್ಚು ಆಕರ್ಷಣೆ ವಿಷಯ ವಿಶ್ಲೇಷಣೆಯಲ್ಲಿದೆ. ಪ್ರತಿ ಶೀರ್ಷಿಕೆಗೆ ಸಂಬAದಿಸಿದ ಜಗತ್ಪçಸಿದ್ಧ ವಿಜ್ಞಾನಿಗಳ, ವಿದ್ವಾಂಸರ ಸಮಂಜಸ, ಸಮರ್ಪಕ ಹೇಳಿಕೆಗಳಿವೆ.
ಮಾನವನ ದೇಹದ ರಚನೆ ಮತ್ತು ಕಾರ್ಯದ(ಂಟಿಚಿಣomಥಿ ಚಿಟಿಜ Phಥಿsioಟogಥಿ) ಬಗ್ಗೆ ಎಲ್ಲರೂ ತಮ್ಮ ಶಾಲೆಕಾಲೇಜುಗಳಲ್ಲಿ ಅಧ್ಯಯನ ಮಾಡಿಯೇ ಇರುತ್ತಾರೆ. ಆದ್ದರಿಂದ ಅಂಥ ಅಂಶಗಳಿಗೆ ಇಲ್ಲಿ ಪ್ರಾಶಸ್ತö್ಯ ನೀಡಿಲ್ಲ. ಆದರೆ ಅದೇ ಮಾನವನ ದೇಹದ ಬಗೆಗಿನ ಸ್ವಾರಸ್ಯಕರವಾದ, ಅದ್ಭುತವೆನ್ನಿಸುವ, ನಿತ್ಯ ಜೀವನದಲ್ಲಿ ತಿಳಿದಿರಬೇಕಾದ ಹಾಗೂ ನಮ್ಮ ಜೀವನವನ್ನು ಪೂರ್ತಿಯಾಗಿ ಅನುಭವಿಸಲು ಮತ್ತು ನಮ್ಮನ್ನು ಅರಿಯಲು ಸಾಮಾನ್ಯವಾಗಿ ತಿಳಿದಿರಬೇಕಾದ ವಿಷಯಗಳ ಬಗ್ಗೆ ಇಲ್ಲಿ ಹೇಳಲು ಪ್ರಯತ್ನಿಸಲಾಗಿದೆ. ಹಾಗೂ ಮಾನವನ ದೇಹದ ಬಗ್ಗೆ ಇತ್ತೀಚಿನ ಸಂಶೋಧನೆಗಳಿAದ ಬೆಳಕಿಗೆ ಬಂದ ಅಂಶಗಳನ್ನೂ ಹಾಗೂ ಅದರಿಂದಾಗಿ ಮಾನವನನ್ನು ಇಡಿಯಾಗಿ ನೋಡುವ (ದೇಹ ಬೇರೆ, ಮನಸ್ಸು ಬೇರೆ, ಪ್ರಜ್ಞೆ ಬೇರೆ ಮುಂತಾಗಿ ನೋಡದೆ) ಅವಶ್ಯಕತೆಯನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಓದುಗರಲ್ಲಿ ಮಾನವನ ದೇಹವನ್ನು ಹಾಗೂ ಅದರಲ್ಲಿ ಅವಿರ್ಭವಿಸಿರುವ ಮನಸ್ಸು ಮತ್ತು ಪ್ರಜ್ಞೆಯನ್ನು ಕುರಿತು ಆಸಕ್ತಿ ಕೆರಳಿಸುವಲ್ಲಿ ಈ ಪುಸ್ತಕವು ಯಶಸ್ವಿಯಾಗಿದೆ.
ಕುರಿತು ಆಸಕ್ತಿ ಕೆರಳಿಸುವಲ್ಲಿ ಈ ಪುಸ್ತಕವು ಯಶಸ್ವಿಯಾಗಿದೆ.
ಇಲ್ಲಿ ಸಾಮಾನ್ಯರಿಗೆ ಗೊತ್ತಿರದ ದೇಹದ ಕೌತುಕಮಯ ವಿಷಯಗಳ ವಿವರಣೆಗಳಿವೆ. ಹುಬ್ಬೇರಿಸುವಂತೆ ಮಾಡುವ ಸತ್ಯ ಅಂಕಿ ಸಂಖ್ಯೆಗಳಿವೆ. ವಿಶೇಷವೆಂದರೆ, ಎಲ್ಲೂ ಕಾಲ್ಪನಿಕತೆ, ಭಾವುಕತೆ ಇಣುಕದಿರುವುದು. ವಸ್ತುನಿಷ್ಠ ವಿಚಾರಗಳಿರುವುದು. ಎಲ್ಲೂ ಏಕತಾನತೆ ಸುಳಿದಿಲ್ಲ. ಅದ್ಭುತ ಮಾನವನ ದೇಹದ ಎಲ್ಲ ಅಂಗಾAಗಗಳ ಅಲ್ಪ ಸ್ವಲ್ಪ ಮಾಹಿತಿ ಪುಸ್ತಕದುದ್ದಕ್ಕೂ ಅನಾವರಣಗೊಂಡಿದೆ. ಸಂಪೂರ್ಣ ಮಾಹಿತಿಯನ್ನು ಒಂದು ಹೊತ್ತಿಗೆಯಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಇದರ ಪ್ರಜ್ಞೆಯ ಹಿನ್ನೆಲೆಯಲ್ಲಿ ಓದುಗರಿಗೆ ಅದ್ಭುತಗಳ ರಸದೌತಣ ಬಡಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದು ಜನಸಾಮಾನ್ಯರಲ್ಲಿ ದೇಹದ ಬಗ್ಗೆ ಜಾಗ್ರತಗೊಳಿಸಲು ಮಾಡಿದ ಪ್ರಯತ್ನ.
ಈ ದೇಹ ವಿಶ್ವದಲ್ಲಿಯೇ ಅತ್ಯಂತ ಚಾಣಾಕ್ಷ, ಕುಶಲ ಅನುಭವೀ ಇಂಜನೀಯರ ನಿರ್ಮಿಸಿದ ಯಂತ್ರ. ಬಿಡುವಿಲ್ಲದೆ, ದಣಿವರಿಯದೇ ಮಿಡಿಯುವ, ದೇಹಕ್ಕೆಲ್ಲಾ ರಕ್ತ ಪೂರೈಸುವ ಜಗತ್ತಿನ ಅದ್ಭುತ ಪಂಪ್ - ಹೃದಯ, ಅಚ್ಚರಿ ಮೂಡಿಸುವ ಕ್ಯಾಮರಾ - ಕಣ್ಣು, ಆಡಿಯೋ(ಶ್ರವಣ) ಉಪಕರಣಗಳು - ಕಿವಿಗಳು, ದೇಹದಲ್ಲಿ ಕೂಡಿಬಿದ್ದ ಕಸವನ್ನು ಸ್ವಚ್ಛ ಮಾಡುವ ಜಾಡಮಾಲಿಗಳು – ಮೂತ್ರಪಿಂಡಗಳು, ದೇಹದಾಂತರಿಕ ವಾಯುಮಾಲಿನ್ಯ ಹೋಗಲಾಡಿಸುವ - ಶ್ವಾಸಕೋಶಗಳು ಮತ್ತು ಅತ್ಯದ್ಭುತ ಕಂಪ್ಯೂಟರ್ - ಮೆದುಳು, ಮುಂತಾದ ಸಾರ್ವಕಾಲಿಕ ಸತ್ಯಗಳು ಈ ಪುಸ್ತಕದಲ್ಲಿ ಬಿಂಬಿತವಾಗಿವೆ. ವಿವಿಧ ಅಂಗಾAಗಗಳ ಕಾರ್ಯ ಕಲಾಪಗಳು ಮನಮುಟ್ಟುವಂತಿವೆ. ನೀರನ್ನು ಕುಡಿಯುವದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ. ವಿಸರ್ಜನಾಂಗಗಳ ಕಾರ್ಯನಿರ್ವಹಣೆ, ಜನನೇಂದ್ರಿಯ ಮತ್ತು ಸಂತಾನೋತ್ಪತ್ತಿ, ಚೆನ್ನಾಗಿ ಮೂಡಿ ಬಂದಿವೆ. ಪ್ರತಿ ಮಾನವಭ್ರೂಣ ಅಂಕುರಗೊAಡಾಗ ಅವನೊಂದು ಏಕಕೋಶ ಜೀವಿಯಾಗಿರುತ್ತಾನೆ ಎಂಬ ಸತ್ಯ ಜನನಾಂಗಗಳು ಮತ್ತು ಸಂತಾನೋತ್ಪತ್ತಿಯಲ್ಲಿ ಮಾರ್ಮಿಕವಾಗಿ ಮೂಡಿಬಂದಿದೆ. ದೇಹದ ರಾಸಾಯನಿಕ ಕಾರ್ಖಾನೆಗಳು-ಗ್ರಂಥಿಗಳು ಕುತೂಹಲಕಾರಿಯಾಗಿದೆ.
‘ಮಾನವನ ದೇಹದ ಕೊರತೆಗಳು’ ಮತ್ತು ‘ನಾವು ನಾವಲ್ಲ’ ಓದುವಾಗ ವಿಸ್ಮಯ, ಉಲ್ಲಾಸ ಸಮ್ಮಿಳಿತವಾಗಿ ವಿಜ್ಞಾನ ಸುಲಿದ ಬಾಳೆಹಣ್ಣು ಆಗಿರದಿದ್ದರೂ, ಕಬ್ಬಿಣದ ಕಡಲೆಯಂತೂ ಅಲ್ಲ ಎಂಬ ಅರಿವು ಮೂಡುತ್ತದೆ. ಮಾನವನ ದೇಹದಲ್ಲಿಯ ಕುಂದು ಕೊರತೆಗಳನ್ನು ನೀಗಿದರೆ ಮನುಷ್ಯ ‘ಸೂಪರ್ ಮ್ಯಾನ್’ ಆಗುವದರಲ್ಲಿ ಸಂಶಯವಿಲ್ಲ.
ಮಾನವನ ದೇಹ, ಮನಸು, ಬುದ್ಧಿಗಳ ಹಾಗೂ ಅದರ ಹಿಂಬದಿಯಲ್ಲಿ ಇದ್ದು ಎಲ್ಲವನ್ನೂ ಅರಿಯುವ ಪ್ರಜ್ಞೆ ಅಥವಾ ಧಿವ್ಯತೆಯ ಬಗ್ಗೆ ಹೇಳಿದ ಜಗತ್ತಿನ ಎಷ್ಟೋ ಮಹನೀಯರ, ವಿಜ್ಞಾನಿಗಳ, ತತ್ವಜ್ಞಾನಿಗಳ, ಅನುಭಾವಿಗಳ ಮಾತುಗಳನ್ನು ಕನ್ನುಡಿಗಿಳಿಸಿ ಇಲ್ಲಿ ಕೊಡಲಾಗಿದೆ. ಅವುಗಳಿಂದ ಸ್ಫೂರ್ತಿಗೊಂಡು ಓದುಗರು ಇನ್ನೂ ಹೆಚ್ಚು ಈ ವಿಷಯದಲ್ಲಿ ಮಗ್ನರಾಗಿ ‘ತನ್ನ ತಾನು ಅರಿಯುವಲ್ಲಿ’ ಮೊದಲ ಹೆಜ್ಜೆ ಇಡಲೆಂಬುದೇ ಲೇಖಕರ ಆಶಯ.
ಈ ಸಂದರ್ಭದಲ್ಲಿ ಓಶೋ ಅವರ ಮಾತು “ಯಾವ ಶಿಕ್ಷಣ ನಿಮಗೆ ನಿಮ್ಮ ದೇಹದ ಕುರಿತ ವಿಷಯವನ್ನು ಪರಿಚಯಿಸುವುದಿಲ್ಲವೋ, ದೇಹವನ್ನು ಪ್ರೀತಿಸುವುದನ್ನು ಕಲಿಸುವುದಿಲ್ಲವೋ, ನಿಮ್ಮ ದೇಹದ ಕುರಿತು ಅನುಕಂಪದಿAದ ಇರುವುದನ್ನು ಕಲಿಸುವುದಿಲ್ಲವೋ, ನಿಮ್ಮ ದೇಹದ ರಹಸ್ಯದೊಳಗೆ ಪ್ರವೇಶಿಸಲು ಪ್ರೇರೇಪಿಸುವುದಿಲ್ಲವೋ, ನಿಮ್ಮ ಪ್ರಜ್ಞೆಯನ್ನು ಪರಿಚಯಿಸುವುದಿಲ್ಲವೋ, ಹಾಗೂ ಆ ನಿಮ್ಮ ಪ್ರಜ್ಞೆಯೊಳಗೆ ಹೇಗೆ ಪ್ರವೇಶಿಸಬೇಕು ಎಂಬುದನ್ನು ಕಲಿಸುವುದಿಲ್ಲವೋ ಅದು ಶಿಕ್ಷಣವೇ ಅಲ್ಲ”, ಈ ಪುಸ್ತಕದ ತಿರುಳಿಗೆ ಹೆಚ್ಚು ಪ್ರಸ್ತುತವೆನಿಸುತ್ತದೆ.