ಪ್ರಸಕ್ತ ಶತಮಾನದ ಅತ್ಯಂತ ಮೇಧಾವಿ, ಸೈದ್ಧಾಂತಿಕ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮತ್ತು ಅವರ ಸಹೋದ್ಯೋಗಿ ಲಿಯೋನಾರ್ಡ ಮ್ಲಾಡಿನೋವ್ ಅವರ ಇತ್ತೀಚಿನ ಪುಸ್ತಕವಾದ ‘ದಿ ಗ್ರಾö್ಯಂಡ್ ಡಿಜೈನ್’ ಒಂದು ಮಾನವೇತಿಹಾಸದ ಮತ್ತು ಖಭೌತಿಕ ವಿಜ್ಞಾನದ ಇತಿಹಾಸಗಳನ್ನು ಸಂಮಿಲನಗೊಳಿಸಿ ಅತ್ಯಂತ ವಿಚಾರಪ್ರಚೋದಕ ಕೃತಿ. ಅದರ ಸಾರವನ್ನೆಲ್ಲ ಶಬ್ದಶಃ ಅನುವಾದ ಮಾಡದೆ ಭಾವಾನುವಾದ ಮಾಡುವ ಪ್ರಯತ್ನ ಮಾಡಿದ್ದಾರೆ. ಗೆಲಿಲಿಯೋ, ನ್ಯೂಟನ್, ಐನ್‌ಸ್ಟೆöÊನ್, ಮ್ಯಾಕ್ಸವೆಲ್, ಫೆರಡೇ, ಮ್ಯಾಕ್ಸ ಪ್ಲಾö್ಯಂಕ್, ಷ್ರೋಡಿಂಜರ್, ಹೈಸೆನ್‌ಬರ್ಗ, ಫೇಯ್ನ್ಮನ್‌ರ ಶಾಸ್ತಿçÃಯ ಭೌತವಿಜ್ಞಾನ, ಕ್ವಾಂಟಮ್ ಸಿದ್ಧಾಂತಗಳಲ್ಲದೆ, ಗುರುತ್ವ ಬಲ, ವಿದ್ಯುತ್‌ಕಾಂತೀಯ ಬಲ, ದುರ್ಬಲ ಬಲ, ತೀಕ್ಷ÷್ಣ ಬಲ ಮುಂತಾದ ಸೃಷ್ಟಿಯ ಎಲ್ಲ ಬಲಗಳನ್ನು ಒಟ್ಟುಗೂಡಿಸಿ ಎಲ್ಲದಕ್ಕೂ ಒಂದೇ ಸಿದ್ಧಾಂತದ ಹುಡುಕಾಟ ಈ ಪುಸ್ತಕದ ಸಾರ. ಮೊದಲನೇಯ ಅಧ್ಯಾಯ(‘ಅಸ್ತಿತ್ವದ ವಿಸ್ಮಯ’)ವು ಅಸ್ತಿತ್ವದ ಹಿಂದಿನ ರಹಸ್ಯದೊಂದಿಗೆ ಪ್ರಾರಂಭವಾಗುತ್ತದೆ. ಎರಡನೇಯ ಅಧ್ಯಾಯ(‘ಪ್ರಕೃತಿ ನಿಯಮಗಳ ಆಡಳಿತ’)ವು ಈ ವಿಶ್ವವನ್ನಾಳುವ ಸೃಷ್ಟಿನಿಯಮಗಳನ್ನು ಮಾನವನು ಹೇಗೆ ಅರಿತುಕೊಳ್ಳುತ್ತಾ ಬಂದಿದ್ದಾನೆ ಎಂಬುದನ್ನು ಕೂಲಂಕುಶವಾಗಿ ತಿಳಿಸುತ್ತದೆ. ಮೂರನೇಯ ಅಧ್ಯಾಯ(‘ಸತ್ಯವೆಂದರೇನು’)ವು ಸತ್ಯವೆಂದರೆ ಏನು ನಮಗೆ ತೋರುತ್ತಿರುವುದು ನಿಜವಾದ ಸತ್ಯವೇ ನಾವು ಕಂಡುಕೊAಡ ಜಗತ್ತಿನ ಚಿತ್ರಣ ನಿಜವೇ ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚಿಸುತ್ತದೆ. ನಾಲ್ಕನೇಯ ಅಧ್ಯಾಯ(‘ಪರ್ಯಾಯ ಇತಿಹಾಸಗಳು’)ವು ಪರಮಾಣು ಲೋಕದಲ್ಲಿ ಯಾವುದೇ ವಿದ್ಯಮಾನಕ್ಕೆ ಬಹಳಷ್ಟು ಇತಿಹಾಸಗಳು ಇರುವ ಸಾಧ್ಯತೆಯನ್ನು ವಿಷದಿಸುತ್ತದೆ ಹಾಗೂ ಇದು ಇಡೀ ವಿಶ್ವಕ್ಕೆ ಅನ್ವಯವಾಗುವ ಬಗ್ಗೆ ಚರ್ಚಿಸುತ್ತದೆ. ಐದನೇಯ ಅಧ್ಯಾಯ(‘ಎಲ್ಲದಕ್ಕೂ ಏಕೈಕ ಸಿದ್ಧಾಂತ’)ವು ಇಡೀ ವಿಶ್ವವನ್ನು ಒಂದೇ ಸಿದ್ಧಾಂತದ ಅಡಿಯಲ್ಲಿ ವಿವರಿಸಬಹುದಾದ ಸಾಧ್ಯತೆಯನ್ನು ವಿವರವಾಗಿ ನೋಡುವ ಪ್ರಯತ್ನ ಮಾಡುತ್ತದೆ. ಆರನೇಯ ಅಧ್ಯಾಯ(‘ವಿಶ್ವದ ಆಯ್ಕೆ’)ವು ನಮ್ಮ ವಿಶ್ವದಂತಹ ಅನೇಕ ವಿಶ್ವಗಳಿರುವ ಸಾಧ್ಯತೆಯನ್ನು ಹೇಳಿ ನಾವಿರುವ ವಿಶ್ವದ ವಿಶಿಷ್ಟತೆಯನ್ನು ತಿಳಿಸುತ್ತದೆ. ಏಳನೇಯ ಅಧ್ಯಾಯ(‘ನಿಜವಾದ ಪವಾಡ’)ವು ಈ ವಿಶಿಷ್ಟ ಭೂಮಿಯಲ್ಲಿ ಜೀವದ ಹುಟ್ಟೇ ಒಂದು ಪ್ರತ್ಯಕ್ಷ ಪವಾಡ ಎಂದು ಹೇಳುತ್ತದೆ. ಎಂಟನೇಯ ಅಧ್ಯಾಯ(‘ಅಗಾಧ ಸೃಷ್ಟಿ / ಅದ್ಭುತ ರಚನೆ’)ವು ಕಂಪ್ಯೂಟರಿನಲ್ಲಿ ವಿಶ್ವದ ಮಾದರಿಯನ್ನು ಮಾಡಿ ಕೆಲವು ಮೂಲ ನಿಯಮಗಳನ್ನು ಕೊಟ್ಟು ಅದರಲ್ಲಿಯ ಮೂಲಘಟಕಗಳಿಗೆ ತಮ್ಮನ್ನು ತಾವೇ ಉತ್ಪಾದಿಸುವ ಸಾಮರ್ಥ್ಯ, ಸ್ವಯಂ-ಪ್ರಜ್ಞೆ ಮುಂತಾದವುಗಳು ಬರುವ ಸಾಧ್ಯತೆಯನ್ನು ತೋರಿಸುತ್ತವೆ.
ಮಾನವ ಸಹಜ ಕುತೂಹಲ ತಣಿಯದಿದ್ದರೂ ಸೃಷ್ಟಿಯ ಉಗಮದ, ಉತ್ಕಾçಂತಿಯ ಭೂತ ಭವಿಷ್ಯಗಳನ್ನು ಪರಿಶೋಧಿಸುವ ನಿರಂತರ ಪ್ರಯತ್ನದಲ್ಲಿ ಈ ಪುಸ್ತಕವೊಂದು ಮೈಲಿಗಲ್ಲು. ಕ್ಲಿಷ್ಟ ಗಣಿತವನ್ನು ಸಾಮಾನ್ಯ ಓದುಗರ ಸಲುವಾಗಿ ದೂರವಿರಿಸಿ, ಕಷ್ಟಕರ ಸಿದ್ಧಾಂತಗಳನ್ನು ಸರಳೀಕರಿಸಿ, ನಿತ್ಯಾನುಭವಕ್ಕೆ ಅಸಂಗತವಾದ ವಿಷಯಗಳನ್ನು ಸಹಜ ನ್ಯಾಯವೆಂದೇ ಪ್ರತಿಪಾದಿಸುವ ಕೆಲವು ಹಂತಗಳು ಸಾಮಾನ್ಯ ಓದುಗರ ಮನಸ್ಥೆöÊರ್ಯ ಕೆದಕಿದರೂ ವೈಚಾರಿಕತೆಯನ್ನು ಅಳವಡಿಸಿಕೊಳ್ಳುವ ವೈಶಾಲ್ಯತೆಯ ಅವಶ್ಯಕತೆಯನ್ನು ಪುಷ್ಟೀಕರಿಸುತ್ತದೆ ಈ ಕೃತಿ.
ಈ ವಿಶ್ವವು ಹೀಗೆ ಏಕೆ ಇದೆ? ನಾವೇಕೆ ಇದ್ದೇವೆ? ಸೃಷ್ಟಿನಿಯಮಗಳ ಆಧಿಪತ್ಯವೇ ಪರಮ ಸತ್ಯವೇ? ಜಗದ್ಧಾತೃ ಬೇಡವೋ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವದರೊಂದಿಗೆ ವಿಜ್ಞಾನ ಮತ್ತು ಆಧ್ಯಾತ್ಮದ ಸಂಘರ್ಷದ ಛಾಯೆ ಕಾಣಬಹುದು. ಇದು ನಾಸ್ತಿಕವಾದಕ್ಕೆ ಇನ್ನೂ ಬಗ್ಗದ ಆಸ್ತಿಕ ವಿಚಾರವನ್ನು ಕೈಬಿಡದ ಹಂತಕ್ಕೆ ಬಂದು ನಿಂತAತಾಗುತ್ತದೆ. ನೈತಿಕತೆ, ಮಾನವೀಯತೆ, ಧರ್ಮ, ಆಧ್ಯಾತ್ಮ ಮುಂತಾದವುಗಳನ್ನೆಲ್ಲ ವಿಜ್ಞಾನವು ಮೀರಬಲ್ಲುದೆ? ವೈಜ್ಞಾನಿಕ ಸತ್ಯವೇ ಪರಮಸತ್ಯವೇ? ಇಂಥ ಸುದೀರ್ಘ ವಿಚಾರವನ್ನು ಕನ್ನಡದಲ್ಲಿ ಪ್ರಚೋದಿಸುತ್ತದೆ.
ಅಲ್ಬರ್ಟ ಐನ್‌ಸ್ಟೆöÊನ್‌ರ ಸಾಪೇಕ್ಷ ಸಿದ್ಧಾಂತ, ಮ್ಯಾಕ್ಷ ಪ್ಲಾö್ಯಂಕ್ ಅವರ ಕ್ವಾಂಟಮ್ ಸಿದ್ಧಾಂತಗಳನ್ನು ಎಷ್ಟರ ಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇ ಜತನದಿಂದ ‘ದರ್ಶನ’ವೆಂದೂ ಕರೆಯಬಹುದು. ವಸ್ತು ಮತ್ತು ಚೈತನ್ಯವನ್ನು ಹಾಗೂ ಕಾಲ ಮತ್ತು ದೇಶವನ್ನು ಒಂದೇ ಮಹಾ ಋತದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಅನನ್ಯವಾದುದು. ಆಧುನಿಕ ಭೌತವಿಜ್ಞಾನದ ವಿಚಿತ್ರವೆನಿಸುವ ಸತ್ಯಗಳು ಇದರಲ್ಲಿ ನಮೂದಿಸಲ್ಪಟ್ಟಿವೆ. ಅವುಗಳೆಂದರೆ : ಕಾಲವೆಂಬುದು ವಿಶ್ವದ ನಾಲ್ಕನೇಯ ಆಯಾಮ, ಬೆಳಕಿಗೆ ದ್ರವ್ಯರಾಶಿ ಇದೆ, ವಿಶ್ವದ ಗುರುತ್ವಕ್ಷೇತ್ರದಲ್ಲಿ ಬೆಳಕು ವಕ್ರ ಪಥದಲ್ಲಿ ಸಾಗುತ್ತದೆ, ದೇಶವು ಬಾಗಿದೆ, ವಿಶ್ವವು ಅನಂತವಲ್ಲ ಆದರೆ ಎಲ್ಲೆ ಇಲ್ಲದ್ದು, ದ್ರವ್ಯ ಮತ್ತು ಶಕ್ತಿ ಮೂಲತಃ ಒಂದೇ, ವೇಗವೃದ್ಧಿಯೊಂದಿಗೆ ಕಾಲ ಸಂಕುಚಿತವಾಗುತ್ತದೆ, ವಿಶ್ವಕ್ಕೆ ಬಹಳ ಇತಿಹಾಸಗಳಿವೆ, ವೀಕ್ಷಕನು ತನ್ನ ಈಗಿನ ವೀಕ್ಷಣೆಯಿಂದ ಭೂತಕಾಲವನ್ನೇ ಬದಲಿಸಬಹುದು, ಅಣ್ಣನು ಬೆಳಕಿನ ವೇಗದಲ್ಲಿ ಬಾಹ್ಯಾಕಾಶ ಯಾತ್ರೆ ಮಾಡಿ ಮರಳಿ ಬಂದಾಗ ತಮ್ಮನಿಗಿಂತ ಚಿಕ್ಕವನಾಗುತ್ತಾನೆ, ದ್ರವ್ಯಕಣದ ವೇಗ ಬೆಳಕಿನ ವೇಗಕ್ಕಿಂತ ಯಾವಾಗಲೂ ಕಡಿಮೆಯೇ ಇರುತ್ತದೆ.
ಆಧುನಿಕ ಭೌತವಿಜ್ಞಾನ ಹಾಗೂ ಪರ‍್ವಾತ್ಯ ತತ್ವಜ್ಞಾನಗಳ ನಡುವಿನ ಸಾಮ್ಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಅಮೇರಿಕದ ಭೌತವಿಜ್ಞಾನಿ ಫ್ರಿಜೋ ಕಾಪ್ರಾ (ಈಡಿiಣzoಜಿ ಅಚಿಠಿಡಿಚಿ) ಅವರ ಒಂದು ಹೇಳಿಕೆೆ, “ಎಲ್ಲ ಯುಗಗಳ ಎಲ್ಲ ದೇಶಪಂಥಗಳ ಆಧ್ಯಾತ್ಮಿಕ ವಿಶ್ವದರ್ಶನಕ್ಕೂ ಸಮಾನ ಅಂಶ ಯಾವುದುಂಟೋ ಅದರ ಕಡೆಗೇ ಅತ್ಯಾಧುನಿಕ ಭೌತಶಾಸ್ತçದ ಜ್ಞಾನವೂ ಕೈತೋರಿಸುತ್ತಿದೆ” ಪ್ರಸ್ತುತ ಈ ಪುಸ್ತಕದ ವಿಷಯಕ್ಕೆ ಸರಿಹೊಂದುತ್ತದೆ.